ಶ್ರೀಜಗನ್ನಾಥದಾಸ ವಿರಚಿತ ಶ್ರೀವಿಘ್ನೇಶ್ವರಸಂಧಿ
ಹರಿಕಥಾಮೃತಸಾರ ಗುರುಗಳ
ಕರುಣದಿಂದಾಪನಿತು ಪೇಳುವೇ
ಪರಮಭಗವದ್ಭಕ್ತರಿದನಾದರದಿ ಕೇಳುವುದು ॥೧॥


ಶ್ರೀಶನಂಘ್ರಿಸರೋಜಭೃಂಗ ಮ-
ಹೇಶಸಂಭವ ಮನ್ಮನದೋಳು ಪ್ರ-
ಕಾಶಿಸನುದಿನ ಪ್ರಾರ್ಥಿಸುವೇ ಪ್ರೇಮಾತಿಶಯದಿಂದ
ನೀ ಸಲಹು ಸಜ್ಜನರ ವೇದ-
ವ್ಯಾಸಕರುಣಾಪಾತ್ರ ಮಹದಾ-
ಕಾಶಪತಿ ಕರುಣಾಳು ಕೈಪಿಡಿದೇಮ್ಮನುದ್ಧರಿಸು ॥೨॥


ಏಕದಂತ ಇಭೇಂದ್ರಮುಖ ಚಾ-
ಮೀಕರಕೃತಭೂಷಣಾಂಗ ಕೃ-
ಪಾಕಟಾಕ್ಷದಿ ನೋಡು ವಿಜ್ಞಾಪಿಸುವೇ ಇನಿತೇಂದು
ನೋಕನೀಯನ ತುತಿಸುತಿಪ್ಪ ವಿ-
ವೇಕಿಗಳ ಸಹವಾಸಸುಖಗಳ
ನೀ ಕರುಣಿಸುವದೇಮಗೇ ಸಂತತ ಪರಮಕರುಣದಲಿ॥೩॥


ವಿಘ್ನರಾಜನೇ ದುರ್ವಿಷಯದೋಳು
ಮಗ್ನವಾಗಿಹ ಮನವ ಮಹದೋ-
ಷಘ್ನನಂಘ್ರಿಸರೋಜಯುಗಳದಿ ಭಕ್ತಿಪೂರ್ವಕದಿ
ಲಗ್ನವಾಗಲಿ ನಿತ್ಯ ನರಕಭ-
ಯಾಗ್ನಿಗಳಿಗಾನಂಜೇ ಗುರುವರ
ಭಗ್ನಗೈಸೇನ್ನವಗುಣಗಳನು ಪ್ರತಿದಿವಸದಲ್ಲಿ॥೪॥


ಧನಪ ವಿಷ್ವಕ್ಸೇನ ವೈದ್ಯಾ-
ಶ್ವಿನಿಗಳಿಗೇ ಸರಿಯೇನಿಪ ಷಣ್ಮುಖ-
ನನುಜ ಶೇಷಶತಸ್ಥದೇವೋತ್ತಮ ವಿಯದ್ಗಂಗಾ-
ವಿನುತ ವಿಶ್ವೋಪಾಸಕನೇ ಸ-
ನ್ಮನದಿ ವಿಜ್ಞಾಪಿಸುವೇ ಲಕುಮಿ
ವನಿತೇಯರಸನ ಭಕ್ತಿಜ್ಞಾನವ ಕೋಟ್ಟು ಸಲಹುವದು॥೫॥


ಚಾರುದೇಷ್ಣಾಹ್ವಯನೇನಿಸಿ ಅವ-
ತಾರ ಮಾಡಿದೇ ರುಗ್ಮಿಣೀಯಲಿ
ಗೌರಿಯರಸನ ವರದಿ ಉದ್ಧಟರಾದ ರಾಕ್ಷಸರ
ಶೌರಿಯಾಜ್ಞದಿ ಸಂಹರಿಸಿ ಭೂ-
ಭಾರವಿಳುಹಿದ ಕರುಣಿ ತ್ವತ್ಪಾ-
ದಾರವಿಂದಕೇ ನಮಿಪೇ ಕರುಣಿಪುದೇಮಗೇ ಸನ್ಮತಿಯ॥೬॥


ಶೂರ್ಪಕರ್ಣದ್ವಯ ವಿಜಿತಕಂ-
ದರ್ಪಶರ ಉದಿತಾರ್ಕಸನ್ನಿಭ
ಸರ್ಪವರಕಟಿಸೂತ್ರ ವೈಕೃತಗಾತ್ರ ಸುಚರಿತ್ರ
ಸ್ವರ್ಪಿತಾಂಕುಶಪಾಶಕರ ಖಳ-
ದರ್ಪಭಂಜನ ಕರ್ಮಸಾಕ್ಷಿಗ
ತರ್ಪಕನು ನೀನಾಗಿ ತೃಪ್ತಿಯ ಪಡಿಸು ಸಜ್ಜನರ॥೭॥


ಖೇಶ ಪರಮಸುಭಕ್ತಿಪೂರ್ವಕ
ವ್ಯಾಸಕೃತಗ್ರಂಥಗಳನರಿತು ಪ್ರ-
ಯಾಸವಿಲ್ಲದೇ ಬರೇದು ವಿಸ್ತರಿಸಿದೇಯೋ ಲೋಕದೋಳು
ಪಾಶಪಾಣಿಯೇ ಪ್ರಾರ್ಥಿಸುವೇ ಉಪ-
ದೇಶಿಸೇನಗದರರ್ಥಗಳ ಕರು-
ಣಾಸಮುದ್ರ ಕೃಪಾಕಟಾಕ್ಷದಿ ನೋಡು ಪ್ರತಿದಿನದಿ॥೮॥


ಶ್ರೀಶನತಿನಿರ್ಮಲಸುನಾಭೀ-
ದೇಶವಸ್ಥಿತ ರಕ್ತಶ್ರೀಗಂ-
ಧಾಸುಶೋಭಿತಗಾತ್ರ ಲೋಕಪವಿತ್ರ ಸುರಮಿತ್ರ
ಮೂಷಕಾಸುರವಹನ ಪ್ರಾಣಾ-
ವೇಶಯುತ ಪ್ರಖ್ಯಾತ ಪ್ರಭು ಪೂ-
ರೈಸು ಭಕ್ತರು ಬೇಡಿದಿಷ್ಟಾರ್ಥಗಳ ಪ್ರತಿದಿನದಿ॥೯॥


ಶಂಕರಾತ್ಮಜ ದೈತ್ಯರಿಗತಿಭ-
ಯಂಕರ ಗತಿಗಳೀಯಲೋಸುಗ
ಸಂಕಟಚತುರ್ಥಿಗನೇನಿಸಿ ಅಹಿತಾರ್ಥಗಳ ಕೋಟ್ಟು
ಮಂಕುಗಳ ಮೋಹಿಸುವೇ ಚಕ್ರದ-
ರಾಂಕಿತನೇ ದಿನದಿನದಿ ತ್ವತ್ಪದ-
ಪಂಕಜಗಳಿಗೇ ಬಿನ್ನಯಿಸುವೇನು ಪಾಲಿಪುದು ಏಮ್ಮ ॥೧೦॥


ಸಿದ್ಧವಿದ್ಯಾಧರ ಗಣಸಮಾ-
ರಾಧ್ಯಚರಣಸರೋಜ ಸರ್ವಸು-
ಸಿದ್ಧಿದಾಯಕ ಶೀಘ್ರದಿಂ ಪಾಲಿಪುದು ಬಿನ್ನಯಿಪೇ
ಬುದ್ಧಿವಿದ್ಯಾಜ್ಞಾನಬಲ ಪರಿ-
ಶುದ್ಧಭಕ್ತಿವಿರಕ್ತಿ ನಿರುತನ-
ವದ್ಯನ ಸ್ಮೃತಿಲೀಲೇಗಳ ಸುಸ್ತವನ ವದನದಲಿ॥೧೧॥


ರಕ್ತವಾಸದ್ವಯ ವಿಭೂಷಣ
ಉಕ್ತಿ ಲಾಲಿಸು ಪರಮಭಗವ-
ದ್ಭಕ್ತವರ ಭವ್ಯಾತ್ಮ ಭಾಗವತಾದಿ ಶಾಸ್ತ್ರದಲಿ
ಸಕ್ತವಾಗಲಿ ಮನವು ವಿಷಯವಿ-
ರಕ್ತಿ ಪಾಲಿಸು ವಿದ್ವದಾದ್ಯ ವಿ-
ಮುಕ್ತನೇಂದೇನಿಸೇನ್ನ ಭವಭಯದಿಂದಲನುದಿನದಿ॥೧೨॥


ಶುಕ್ರಶಿಷ್ಯರ ಸಂಹರಿಪುದಕೇ
ಶಕ್ರ ನಿನ್ನನು ಪೂಜಿಸಿದನು ಉ-
ರುಕ್ರಮ ಶ್ರೀರಾಮಚಂದ್ರನು ಸೇತುಮುಖದಲ್ಲಿ
ಚಕ್ರವರ್ತೀಪ ಧರ್ಮರಾಜನು
ಚಕ್ರಪಾಣಿಯ ನುಡಿಗೇ ಭಜಿಸಿದ
ವಕ್ರತುಂಡನೇ ನಿನ್ನೋಳೇಂತುಟೋ ಈಶನುಗ್ರಹವು ॥೧೩॥


ಕೌರವೇಂದ್ರನು ನಿನ್ನ ಭಜಿಸದ
ಕಾರಣದಿ ನಿಜಕುಲಸಹಿತ ಸಂ-
ಹಾರವೈದಿದ ಗುರುವರ ವೃಕೋದರನ ಗದೇಯಿಂದ
ತಾರಕಾಂತಕನನುಜ ಏನ್ನ ಶ-
ರೀರದೋಳು ನೀ ನಿಂತು ಧರ್ಮ-
ಪ್ರೇರಕನು ನೀನಾಗಿ ಸಂತೈಸೇನ್ನ ಕರುಣದಲಿ॥೧೪॥


ಏಕವಿಂಶತಿಮೋದಕಪ್ರಿಯ
ಮೂಕರನು ವಾಗ್ಮಿಗಳ ಮಾಳ್ಪೇ ಕೃ-
ಪಾಕರೇಶ ಕೃತಜ್ಞ ಕಾಮದ ಕಾಯೋ ಕೈಪಿಡಿದು
ಲೇಖಕಾಗ್ರಣಿ ಮನ್ಮನದ ದು-
ರ್ವ್ಯಾಕುಲವ ಪರಿಹರಿಸು ದಯದಿ ಪಿ-
ನಾಕಿಭಾರ್ಯಾತನುಜ ಮೃದ್ಭವ ಪ್ರಾರ್ಥಿಸುವೇ ನಿನ್ನ॥೧೫॥


ನಿತ್ಯಮಂಗಳಚರಿತ ಜಗದು-
ತ್ಪತ್ತಿಸ್ಥಿತಿಲಯನಿಯಮನ ಜ್ಞಾ-
ನತ್ರಯಪ್ರದ ಬಂಧಮೋಚಕ ಸುಮನಸಾಸುರರ
ಚಿತ್ತವೃತ್ತಿಗಳಂತೇ ನಡೇವ ಪ್ರ-
ಮತ್ತನಲ್ಲ ಸುಹೃಜ್ಜನಾಪ್ತನ
ನಿತ್ಯದಲಿ ನೇನೇ ನೇನೇದು ಸುಖಿಸುವ ಭಾಗ್ಯ ಕರುಣಿಪುದು॥೧೬॥


ಪಂಚಭೇದಜ್ಞಾನವರುಪು ವಿ-
ರಿಂಚಿಜನಕನ ತೋರು ಮನದಲಿ
ವಾಂಛಿತಪ್ರದ ಓಲುಮೇಯಿಂದಲಿ ದಾಸನೇಂದರಿದು
ಪಂಚವಕ್ತ್ರನ ತನಯ ಭವದೋಳು
ವಂಚಿಸದೇ ಸಂತೈಸು ವಿಷಯದಿ
ಸಂಚರಿಸದಂದದಲಿ ಮಾಡು ಮನಾದಿಕರಣಗಳ॥೧೭॥


ಏನು ಬೇಡುವದಿಲ್ಲ ನಿನ್ನ ಕು-
ಯೋನಿಗಳು ಬರಲಂಜೇ ಲಕಮಿ-
ಪ್ರಾಣಪತಿ ತತ್ತ್ವೇಶರಿಂದೋಡಗೂಡಿ ಗುಣಕಾರ್ಯ
ತಾನೇ ಮಾಡುವನೇಂಬ ಈ ಸು-
ಜ್ಞಾನವನೇ ಕರುಣಿಸುವದೇಮಗೇ ಮ-
ಹಾನುಭಾವ ಮುಹುರ್ಮುಹುಃ ಪ್ರಾರ್ಥಿಸುವೇ ಇನಿತೇಂದು ॥೧೮॥


ನಮೋ ನಮೋ ಗುರುವರ್ಯ ವಿಬುಧೋ-
ತ್ತಮ ವಿವರ್ಜಿತನಿದ್ರ ಕಲ್ಪ-
ದ್ರುಮನೇನಿಪೇ ಭಜಕರಿಗೇ ಬಹುಗುಣಭರಿತ ಶುಭಚರಿತ
ಉಮೇಯ ನಂದನ ಪರಿಹರಿಸಹಂ-
ಮಮತೇ ಬುಧ್ದ್ಯಾದಿಂದ್ರಿಯಗಳಾ-
ಕ್ರಮಿಸಿ ದಣಿಸುತಲಿಹವು ಭವದೋಳಗಾವಕಾಲದಲಿ॥೧೯॥


ಜಯಜಯತು ವಿಘ್ನೇಶ ತಾಪ-
ತ್ರಯವಿನಾಶನ ವಿಶ್ವಮಂಗಳ
ಜಯ ಜಯತು ವಿದ್ಯಾಪ್ರದಾಯಕ ವೀತಭಯಶೋಕ
ಜಯ ಜಯತು ಚಾರ್ವಂಗ ಕರುಣಾ-
ನಯನದಿಂದಲಿ ನೋಡಿ ಜನುಮಾ-
ಮಯ ಮೃತಿಗಳನು ಪರಿಹರಿಸು ಭಕ್ತರಿಗೇ ಭವದೋಳಗೇ॥೨೦॥


ಕಡುಕರುಣಿ ನೀನೇಂದರಿದು ಹೇ-
ರೋಡಲ ನಮಿಸುವೇ ನಿನ್ನಡಿಗೇ ಬೇಂ-
ಬಿಡದೇ ಪಾಲಿಸು ಪರಮಕರುಣಾಸಿಂಧು ಏಂದೇಂದು
ನಡುನಡುವೇ ಬರುತಿಪ್ಪ ವಿಘ್ನವ
ತಡೇದು ಭಗವನ್ನಾಮ ಕೀರ್ತನೇ
ನುಡಿದು ನುಡಿಸೇನ್ನಿಂದ ಪ್ರತಿದಿವಸದಲಿ ಮರೇಯದಲೇ ॥೨೧॥


ಏಕವಿಂಶತಿ ಪದಗಳೇನಿಸುವ
ಕೋಕನದ ನವಮಾಲಿಕೇಯ ಮೈ-
ನಾಕಿತನಯಾಂತರ್ಗತಶ್ರೀಪ್ರಾಣಪತಿಯೇನಿಪ
ಶ್ರೀಕರ ಜಗನ್ನಾಥವಿಠ್ಠಲ
ಸ್ವೀಕರಿಸಿ ಸ್ವರ್ಗಾಪವರ್ಗದಿ
ತಾ ಕೋಡುವ ಸೌಖ್ಯಗಳ ಭಕ್ತರಿಗಾವಕಾಲದಲಿ॥೨೨॥