ಫಲವಿದು ಬಾಳ್ದುದಕೇ ಫಲವಿದು ಬಾಳ್ದುದಕೇ ಸಿರಿ ನಿಲಯನ ಗುಣಗಳ ತಿಳಿದು ಭಜಿಸುವದೇ ॥ಪ॥
ಸ್ವೋಚಿತ ಕರ್ಮಗಳಾಚರಿಸುತ ಬಲು
ನೀಚರಲ್ಲಿ ಪೋಗಿ ಯಾಚಿಸದೇ ।
ಖೇಚರವಾಹ ಚರಾಚರ ಬಂಧಕ
ಮೋಚಕನಹುದೇಂದ್ಯೋಚಿಸುತಿಪ್ಪೋದೇ ॥೧॥
ನಿಚ್ಚಸುಭಕುತಿಯೋಳಚ್ಯುತನಂಘ್ರಿಗ
ಳರ್ಚಿಸಿ ಮೇಚ್ಚಿಸುತೇಚ್ಚರದಿ ।
ತುಚ್ಚವಿಷಯಗಳನಿಚ್ಚಿಸದಲೇ ಯ-
ದೃಚ್ಛಾಲಾಭದಿಂ ಪ್ರೋಚ್ಚನಾಗುವದೇ ॥೨॥
ಮನೋವಾಕ್ಕಾಯದೋಳನುಭವಿಸುವ
ದಿನದಿನದ ವಿಷಯಸಾಧನಗಳನು
ಅನಿಲಾಂತರ್ಗತ ವನರುಹದಳಲೋ-
ಚನಗರ್ಪಿಸಿ ದಾಸನು ನಾನೇಂಬೋದೇ ॥೩॥
ವಾಸವಮುಖವಿಬುಧಾಸುರನಿಚಯಕೇ
ವಾಸುದೇವನೇ ಶುಭಾಶುಭದ
ಈ ಸಮಸ್ತಜಗಕೀಶ ಕೇಶವಾ-
ನೀಶ ಜೀವರೇಂಬೀ ಸುಜ್ಞಾನವೇ ॥೪॥
ಪಂಚಭೇದಯುತ ಪ್ರಪಂಚ ಸತ್ಯ ವಿ-
ರಿಂಚಿಮುಖರು ಬಲಿವಂಚಕಗೇ
ಸಂಚಲ ಪ್ರತಿಮೇ ಅಚಂಚಲ ಪ್ರಕೃತಿಯು
ಸಂಚಿಂತಿಸಿ ಮುದಲಾಂಛನಾಗುವುದೇ ॥೫॥
ಪಂಚಕ್ರತುಗಳಲಿ ಪಂಚಾಗ್ನಿಗಳಲಿ
ಪಂಚಪಂಚರೂಪವ ತಿಳಿದು
ಪಂಚಸುಸಂಸ್ಕಾರರಾಂಚಿತನಾಗಿ
ದ್ವಿಪಂಚಕರಣದಲಿ ಪ್ರಪಂಚಕನರಿವುದೇ ॥೬॥
ಪಾತ್ರರ ಸಂಗಡ ಯಾತ್ರೇಯ ಚರಿಸಿ ವಿ-
ಧಾತೃಪಿತನ ಗುಣಸ್ತೋತ್ರಗಳ
ಶ್ರೋತ್ರದಿ ಸವಿದು ವಿಚಿತ್ರಾನಂದದಿ
ಗಾತ್ರವ ಮರೇದು ಪರತ್ರವ ಪಡೇವುದೇ ॥೭॥
ಹೃದಯದಿ ರೂಪವು ವದನದಿ ನಾಮವು
ಉದರದಿ ನೈವೇದ್ಯವು ಶಿರದಿ
ಪದಜಲ ನಿರ್ಮಾಲ್ಯವನೇ ಧರಿಸಿ ಕೋ-
ವಿದರ ಸದನ ಹೇಗ್ಗದವ ಕಾಯುವದೇ ॥೮॥
ಹಂಸಮೋದಲು ಹದಿನೇಂಟು ರೂಪಗಳ
ಸಂಸ್ಥಾನವ ತಿಳಿದನುದಿನದಿ
ಸಂಸೇವಿಸುವ ಮಹಾಪುರುಷರ ಪದ-
ಪಾಂಸುವ ಧರಿಸಿ ಅಸಂಶಯನಪ್ಪುದೇ ॥೯॥
ವರಗಾಯತ್ರೀನಾಮಕ ಹರಿಗೀ-
ರೇರಡಂಘ್ರಿಗಳ ವಿವರವ ತಿಳಿದು
ತರುವಾಯದಿ ಷಡ್ವಿಧರೂಪವ ಸಾ-
ದರದಲಿ ಧ್ಯಾನಿಸಿ ನಿರುತ ಜಪಿಸುವದೇ ॥೧೦॥
ಬಿಗಿದ ಕಂಠದಿಂ ದೃಗ್ಬಾಷ್ಪಗಳಿಂ
ನಗೇಮೋಗದಿಂ ರೋಮಗಳೋಗೇದು
ಮಿಗೇ ಸಂತೋಷದಿ ನೇಗೇದಾಡುವ ನಾ-
ಲ್ಮೋಗನಯ್ಯನ ಗುಣ ಪೋಗಳಿ ಹಿಗ್ಗುವದೇ ॥೧೧॥
ಗೃಹಕರ್ಮವ ಬ್ಯಾಸರದಲೇ ಪರಮೋ-
ತ್ಸಾಹದಿ ಮಾಡುತ ಮೂಜಗದ
ಮಹಿತನ ಸೇವೇಯಿದೇನುತಲಿ ಮೋದದಿ
ಅಹರಹರ್ಮನದಿ ಸಮರ್ಪಿಸುತಿಪ್ಪುದೇ ।।೧೨॥
ಕ್ಲೇಶಾನಂದಗಳೀಶಾಧೀನ ಸ-
ಮಾಸಮ ಬ್ರಹ್ಮಸದಾಶಿವರು
ಈಶಿತವ್ಯರು ಪರೇಶನಲ್ಲದೇ
ಶ್ವಾಸಬಿಡುವ ಶಕ್ತಿ ಲೇಶವಿಲ್ಲೇಂಬೋದೇ ॥೧೩॥
ಆ ಪರಮಾತ್ಮಗೇ ರೂಪದ್ವಯವು
ಪರಾಪರತತ್ತ್ವಗಳಿದರೋಳಗೇ
ಸ್ತ್ರೀ-ಪುಂಭೇದದಿ ಈ ಪದ್ಮಾಂಡವ
ವ್ಯಾಪಿಸಿ ಇಹನೇಂದೀಪರಿ ತಿಳಿವುದೇ ॥೧೪॥
ಏಕೋತ್ತರ ಪಂಚಾಶದ್ವರ್ಣಗ-
ಳೇಕಾತ್ಮನ ನಾಮಂಗಳಿವು
ಮಾ ಕಮಲಾಸನ ಮೋದಲಾದಮರರು
ಸಾಕಲ್ಯದಿ ಇವನರಿಯರೇಂತೇಂಬುದೇ ॥೧೫॥
ಓಂದು ರೂಪದೋಳಗನಂತರೂಪಗಳು
ಪೋಂದಿಪ್ಪವು ಗುಣಗಣಸಹಿತ
ಹಿಂದೇ ಮುಂದೇ ಏದೇಂದಿಗೂ ಶ್ರೀ
ಗೋವಿಂದಗೇ ಸರಿಮಿಗಿಲಿಲ್ಲೇಂತೇಂಬುದೇ ॥೧೬॥
ಮೇದಿನಿಪರಮಾಣ್ವಂಬುಕಣಂಗಳ-
ನೈದಬಹುದು ಪರಿಗಣತೇಯನು
ಮಾಧವನಾನಂದಾದಿಗುಣಂಗಳ-
ನಾದಿಕಾಲದಿಂದಗಣಿತವೇಂಬುದೇ ॥೧೭॥
ಮೂಜಗದೋಳಗಿಹ ಭೂಜಲ ಖೇಚರ
ಈ ಜೀವರೋಳು ಮಹೌಜಸನ
ಸೋಜಿಗ ಬಹುವಿಧ ನೈಜವಿಭೂತಿಯ
ಪೂಜಿಸುತನುದಿನ ರಾಜಿಸುತಿಪ್ಪುದೇ ॥೧೮॥
ಹರಿಕಥೇ ಪರಮಾದರದಲಿ ಕೇಳುತ
ಮರೇದು ತನುವ ಸುಖ ಸುರಿಯುತಲಿ
ಉರುಗಾಯನಸಂದರುಶನ ಹಾರೈ-
ಸಿರಳು ಹಗಲು ಜರಿಜರಿದು ಬಳಲುವುದೇ ॥೧೯॥
ವಿಷಯೇಂದ್ರಿಯಗಳಲಿ ತದಭಿಮಾನಿ ಸುಮ-
ನಸರಲಿ ನಿಂದು ನಿಯಾಮಿಸುವ
ಶ್ವಸನಾಂತರ್ಗತ ವಾಸುದೇವ ತಾ
ವಿಷಯಗಳನು ಭೋಗಿಸುವನೇಂದರಿವುದೇ ॥೨೦॥
ಗುಣಕಾಲಾಹ್ವಯ ಅಗಮಾರ್ಣವ ಕುಂ-
ಭಿಣಿಪರಮಾಣ್ವಂಬುಧಿಗಳಲಿ
ವನಗಿರಿನದಿಮೋದಲಾದದರೋಳ ಗಿಂ-
ಧನಗತಪಾವಕನಂತಿಹನೇಂಬುದೇ ॥೨೧॥
ಅನಲಂಗಾರದೋಳಿಪ್ಪೋಪಾದಿಲಿ
ಅನಿರುದ್ಧನು ಚೇತನರೋಳಗೇ
ಕ್ಷಣ ಬಿಟ್ಟಗಲದೇ ಏಕೋ ನಾರಾ-
ಯಣ ಶ್ರುತಿಪ್ರತಿಪಾದ್ಯನು ಇಹನೇಂಬುದೇ ॥೨೨॥
ಪಕ್ಷ್ಮಗಳಕ್ಷಗಳಗಲದಲಿಪ್ಪಂತ-
ಕ್ಷರಪುರುಷನಪೇಕ್ಷೇಯಲಿ
ಕುಕ್ಷಿಯೋಳಬ್ಜಜತ್ರ್ಯಕ್ಷಾದ್ಯಮರರ
ಈಕ್ಷಿಸಿ ಕರುಣದಿ ರಕ್ಷಿಪನೇಂಬುದೇ ॥೨೩॥
ಕಾರಣಕಾರ್ಯಾಂತರ್ಗತ ಅಂಶವ-
ತಾರಾವೇಶಾಹಿತ ಸಹಜ
ಪ್ರೇರಕ ಪ್ರೇರ್ಯಾಹ್ವಯ ಸರ್ವತ್ರ
ವಿಕಾರವಿಲ್ಲದಲೇ ತೋರುವನೇಂಬುದೇ ॥೨೪॥
ಪ್ರತಿದಿವಸ ಶ್ರುತಿಸ್ಮೃತಿಗಳಿಂದ ಸಂ-
ಸ್ತುತಿಸುತ ಲಕ್ಷ್ಮೀಪತಿಗುಣವ
ಕೃತಿಪತಿ ಸೃಷ್ಟಿಸ್ಥಿತಿಲಯಕಾರಣ
ಇತರ ದೇವತೇಗಳಲ್ಲಿಲ್ಲೇಂಬುದೇ ॥೨೫॥
ಪವನಮತಾನುಗರವ ನಾನೇಂತೇಂ-
ದವನಿಯೋಳಗೇ ಸತ್ಕವಿಜನರ
ಭವನಗಳಲಿ ಪ್ರತಿದಿವಸದಿ ಸುಕಥಾ-
ಶ್ರವಣ ಮಾಡುತಲಿ ಪ್ರವರನಾಗುವದೇ ॥೨೬॥
ಪನ್ನಗಾಚಲಸನ್ನಿವಾಸ ಪಾ-
ವನ್ನಚರಿತ ಸದ್ಗುಣಭರಿತ
ಜನ್ಯಜನಕಲಾವಣ್ಯಗುಣನಿಧಿ ಜ-
ಗನ್ನಾಥವಿಠಲಾನನ್ಯಪನೇಂಬುದೇ ॥೨೭॥